ನಿಗೂಢ ಜಗತ್ತಿನಲ್ಲಿ ನಮ್ಮ ಚಾರ್ಮಾಡಿ ಘಾಟ್
"ನಿಗೂಢ ಜಗತ್ತು"
" ಅಮಾವಾಸ್ಯೆ ರಾತ್ರಿ " ಹೇಳಿ ಕೇಳಿ ನಾವು ಮಲೆನಾಡಿನ ಹುಡುಗರು ಈ ಶಿಕಾರಿ ಮೀನು ಇದೆಯಲ್ಲ ಮಾಮೂಲಿ ಆಗಷ್ಟೇ ಕಾಲೇಜು ಬಿಟ್ಟು ಮನೆಯಲ್ಲಿದ್ದೆ.
ಅದರಲ್ಲೂ ನನ್ಗೆ ಈ ಕಾಡಿನಲ್ಲಿ ತಿರುಗುವುದು ಅಂದ್ರೆ ನನಗೆ ಬಹಳ ಕುತೂಹಲ ಎಷ್ಟೆಂದರೆ ಒಬ್ಬನೇ ಆದರೂ ಭಯ ಇರುತ್ತಿರಲಿಲ್ಲ ಈ ಕಾಡಿನಲ್ಲಿ ತಿರುಗಬೇಕು ಅನ್ನೋದು ನನ್ನ ಆಸೆ.
ಹೀಗೆ ಒಂದು ದಿನ ಸುಮಾರು ಎಂಟು ವರ್ಷದ ಹಿಂದೆ ನಾನು ನನ್ನೂರಿನ ಇನ್ನೊಬ್ಬ ವ್ಯಕ್ತಿ ( ಹತ್ತಿರದ ಅಲೇಖಾನ್ ) ಊರಿನ ಒಬ್ಬರು ಅವರ ಜೊತೆ ನಾನು ಒಂದು ನಾಯಿ ಕಾಡಿನಲ್ಲಿ ಎರಡು ದಿನ ಸುತ್ತಾಟದ ಜೊತೆಗೆ ಅವರಿಗೆ ಅಲೇಖಾನ್ ಗಿರಿಜನ ಪ್ರದೇಶವಾದ ಕಾರಣ, ಇಲ್ಲಿ ದೊರೆಯುವ ಜೇನು ಮತ್ತು ಕಾಡಿನಲ್ಲಿ ಸಿಗುವ ಸೀಗೆಕಾಯಿ ಇತರ ವಸ್ತುಗಳನ್ನು ಸಂಗ್ರಹ ಮಾಡಿ ಮಾರಾಟ ಅನುಮತಿ ( ಅಂದಿನ ಕಾಲದಲ್ಲಿ ಅವರಿಗೆ ಸರ್ಕಾರ ಗ್ರೀನ್ ಕಾರ್ಡನ್ನು ಒಂದು ಗುರುತಿನ ಚೀಟಿ ) ಕೊಟ್ಟಿತ್ತು. ಜೊತೆಗೆ ನನಗೂ ಕೂಡ ಕಾಡುತ್ತಿರುವ ಆಸೆ ಜಾಸ್ತಿ ಇದ್ದ ಕಾರಣ ಒಂದು ದಿನ ನಾವು ಮೂರು ಜನ ನಿರ್ಧಾರ ಮಾಡಿ ಒಂದು ಪ್ರದೇಶ ಆರಿಸಿಕೊಂಡೆವು ಆ ಜಾಗ ಕೊಟ್ಟಿಗೆಹಾರದಿಂದ ಸುಮಾರು ಮೂರು ಕಿಲೋಮೀಟರು ದೂರದಲ್ಲಿರುವ ಈಗಿನ ಅಲೇಖಾನ್ ಜಲಪಾತ ಅಂದ್ರೆ ಈಗಿನ ಪ್ರವಾಸಿಗರ ಸೆಲ್ಫಿ ಪಾಯಿಂಟ್ ಮತ್ತು ಸುಮಾರು ಐದಾರು ಜನರನ್ನು ಬಲಿ ತೆಗೆದುಕೊಂಡ ಅದೇ ಜಲಪಾತದ ಪಕ್ಕ ಸಮಯ ಸುಮಾರು ಸಂಜೆ 5:00 ಅನ್ಸುತ್ತೆ... ಅದೇ ಜಲಪಾತದ ಪಕ್ಕದಲ್ಲಿರುವ ಒಂದು ತುಂಬಾ ಕಠಿಣ ಮತ್ತು ಕಷ್ಟಕರವಾದ ದಾರಿಯಲ್ಲಿ ಹಾವಿನ ತಲೆಯಂತೆ ಜಾರುವ ಕಲ್ಲುಗಳ ಮಧ್ಯೆ ಜೊತೆಗೆ ನಮಗೆ ಅಡುಗೆಗೆ ಬೇಕಾದ ಸಾಮಾಗ್ರಿಗಳ ಜೊತೆ ಬಾರಿ ಕಲ್ಲಿನಲ್ಲಿ ಸುಮಾರು 200 ಅಡಿಗಿಂತ ಆಳವಾದ ಈ ಜಲಪಾತವನ್ನು ಇಳಿದು ಸುಮಾರು ಅಡುಗೆ ಮತ್ತು ರಾತ್ರಿ ನಿದ್ದೆ ಮಾಡುವುದಕ್ಕೆ ಒಂದು ಸೂಕ್ತ ಜಾಗವನ್ನು ಹುಡುಕಿಕೊಂಡು ಎರಡು ಕಿಲೋಮೀಟರ್ ದೂರದಲ್ಲಿ ಅಲ್ಲಿ ಹರಿಯುವ ಅಲ್ಲದ ಬದಿ ಸಾಲದ ಮೇಲೆ ಕೊನೆಗೆ ಒಂದು ಒಳ್ಳೆಯ ಜಾಗ ಸಿಕ್ಕಿತು. ಅಲ್ಲಿ ತುಂಬ ಸ್ವಚ್ಛವಾಗಿತ್ತು. ನಾವು ತೆಗೆದುಕೊಂಡು ಹೋಗಿದ್ದ ವಸ್ತುಗಳನ್ನು ಎಲ್ಲಾ ತೆಗೆದು ಸಮಯ ಸುಮಾರು ಸಂಜೆ 7:00 ಆಗಿದ್ದರಿಂದ ಅಡುಗೆ ಮಾಡುವ ಕೆಲಸಕ್ಕೆ ನಾನು ಜಾರಿದೆ. ಜೊತೆಯಲ್ಲಿದ್ದ ಇನ್ನುಳಿದ ಇಬ್ಬರು ರಾತ್ರಿ ಚಳಿ ಜಾಸ್ತಿ ಜಾಸ್ತಿ ಬೇಕು ಅಂತ ಮಾಡಿದ್ದು ಅಷ್ಟೇ ನೀರಿನಲ್ಲಿ ಗಾಳ ಹಾಕಿ ಮೀನು ಹಿಡಿದ ಕೆಲಸಕ್ಕೆ ಕೈ ಹಾಕಿದ್ದರು.
ಕಾಡಿನಲ್ಲಿ ಮೊದಲೇ ಹೇಳಿಕೇಳಿ ಅಡುಗೆ ಮಾಡುವುದಕ್ಕೆ ಮನೆಯಷ್ಟು ವ್ಯವಸ್ಥೆ ಇರಲಿಲ್ಲ.. ಅಂತೂ ಇಂತೂ ಅಡುಗೆ ಮಾಡಿ ಊಟದ ಸಮಯ ಒಬ್ಬರ ಮುಖ ಇನ್ನೊಬ್ಬರು ನೋಡಿದರು ಕಾಣದಷ್ಟು ಕತ್ತಲೆ ಅಷ್ಟೇ ಅಲ್ಲ... ಜೋರಾಗಿ ಹರಿಯುವ ನೀರಿನ ಶಬ್ದಕ್ಕೆ ಒಬ್ಬರ ಮಾತು ಕೂಡ ಒಬ್ಬರಿಗೆ ಕೇಳದಷ್ಟು ಕತ್ತಲೆ ಮತ್ತು ಕಠಿಣ ಜಾಗ ನಿಜಕ್ಕೂ ಅಲ್ಲಿಗೆ ಹೋಗುವಾಗ ಇದ್ದ ಖುಷಿ ಅಲ್ಲಿಗೆ ಹೋದಮೇಲೆ ದೇವರಾಣೆ ಇರಲಿಲ್ಲ. ಅಷ್ಟೇ ಅಲ್ಲ ನಾನು ಈ ಕಾಡಿಗೆ ಬಂದ ವಿಷಯ ನಮ್ಮ ಮನೆಯಲ್ಲಿ ಕೂಡ ಹೇಳಿರಲಿಲ್ಲ....! ಯಾಕೋ ಮನಸ್ಸು ನನ್ನೊಳಗೆ ಗೊಂದಲಕ್ಕೆ ಒಳಗಾಗಿ ಜೊತೆಗಾರರ ಮಾತಿಗೆ ಬರೀ ಹೂ... ಹೂ.. ಅಂತ ಮಾತ್ರ ಉತ್ತರಿಸಿದೆ. ಊಟ ಮಾಡಕ್ಕೆ ಎಲ್ರೂ ರೆಡಿಯಾಗಿ ಕೈತೊಳೆದು ಎಲೆಯ ಮೇಲೆ ಅನ್ನ ಹಾಕಿಕೊಂಡು ಬಾಯಿಗೆ ಹಾಕಬೇಕು ಅಷ್ಟೇ ಜೊತೆಗಿದ್ದೆ ಪಾಪ ಇವಾಗ ಸತ್ತು ಸ್ವರ್ಗದಲ್ಲಿರುವ ನಮ್ಮ ಊರಿನ ನಾಗೇಶನ ಅನ್ನೋ ವ್ಯಕ್ತಿ ಹೀರೋ ಸ್ವಲ್ಪ ಊಟ ಮಾಡಬೇಡ ಇಲ್ಲಿ ಮಾಡಿದ ಹಾಡಿಗೆ ಸ್ವಲ್ಪ ಹೊರಗೆ ಬಿಟ್ಟು ಊಟ ಮಾಡಬೇಕು ಇಲ್ಲ ಅಂದ್ರೆ ಹೊಟ್ಟೆನೋವು ಖಂಡಿತ ಈ ಕಾಡಿನಲ್ಲಿ ಅದೆಷ್ಟು ಹೆಣ್ಣುಗಳನ್ನು ಹಾಕಿದ್ದರು ಅಂತಹ ನಮ್ಮ ಹಳ್ಳಿ ಭಾಷೆಯಲ್ಲಿ ಒಂದು ಡೈಲಾಗ್ ಹೊಡೆದು ಸ್ವಲ್ಪ ಅನ್ನ ಮತ್ತೆ ಸಾಂಬಾರ್ ಹೊರಗೆ ಇಟ್ಟು ನಂತರ ಊಟ ಮಾಡಿ ನಿದ್ದೆ ನಾನು ಮತ್ತೆ ನನ್ನ ಜೊತೆ ಇದ್ದವರು ಒಂದು ಕಲ್ಲುಬಂಡೆಯ ಮೇಲೆ ಮಲಗಿ ಸುಮಾರು ಒಂದು ಗಂಟೆ ಕೂಡ ಆಗಿಲ್ಲ. ಅದ್ಯಾಕೋ ನನಗೆ ನಿದ್ದೆ ಕೂಡ ಬರುತ್ತಿರಲಿಲ್ಲ….. ಜೊತೆಯಲ್ಲಿ ಇದ್ದವರು ಸ್ವಲ್ಪ ಎಣ್ಣೆ ಗಿರಾಕಿಗಳು ಅವರಿಗೆ ಬೇಗ ನಿದ್ದೆ ಬಂದಿದೆ. ಆದರೆ ನನ್ನ ಜೊತೆಗಿದ್ದ ನಾಗೇಶಣ್ಣ ಮಾತ್ರ ಎಚ್ಚರವಿದ್ದರೂ ಅದ್ಯಾಕೋ ಗೊತ್ತಿಲ್ಲ ಸಡನ್ನಾಗಿ ನಮ್ಮ ಜೊತೆಗಿದ್ದ ನಾಯಿ ಜೋರಾಗಿ ಅಂದ್ರೆ ತುಂಬಾ ವಿಚಿತ್ರವಾಗಿ ಬೊಬ್ಬೆ ಹಾಕಕ್ಕೆ ಶುರುಮಾಡಿದ್ದು ನಾವು ಅದೇನೋ ಕಾಡುಪ್ರಾಣಿ ಇರಬೇಕು. ಆ ನಾಯಿಗೆ ಹೆದರಿಸಿ ಮತ್ತೆ ನಿದ್ದೆ ಮಾಡುವ ಪ್ರಯತ್ನ ಆದರೆ ಮತ್ತೆ ಮತ್ತೆ ಅದೇ ನಾಯಿ ನಮ್ಮನ್ನು ನಿದ್ದೆ ಮಾಡ್ಸಕ್ಕೆ ಬಿಡಲಿಲ್ಲ ಜೊತೆಗೆ ಮೇಲಿನಿಂದ ಒಂದು ವಿಚಿತ್ರ ಸೌಂಡ್ ಜೊತೆಗಿದ್ದವರು ಎದ್ದು ಕುಳಿತು ಎಂತಹ ಪ್ರಾಣಿ ಕಣ ನೀರು ಕುಡಿಯೋಕೆ ಬರುತ್ತಿರುವುದು ಅಂತ ಹೇಳಿ ನಾಯಿಗೆ ಕಲ್ಲಿನಿಂದ ಹೊಡೆದು ಆಗ ಆ ನಾಯಿ 1:00 ಆದರೂ ಸುದ್ದಿ ಇಲ್ಲ. ಆ ನಾಯಿ ಪ್ರಾಣಿ ಓಡಿಸ್ಕೊಂಡು ಹೋಗಿರಬೇಕು ಅಥವಾ ಮನೆಗೆ ಹೋಗಿರಬೇಕು ಪತ್ತೇನೇ ಇಲ್ಲ. ಮತ್ತೆ ನಾವೆಲ್ಲ ನಿದ್ದೆಗೆ ಜಾರಿದ್ದು ಆಗಲಷ್ಟೇ ಆಗಿತ್ತು ಸಮಯ ಅತಿರ 12ಗಂಟೆ ಅನ್ಸುತ್ತೆ… ಜೊತೆಗಿದ್ದ ಸಿನಿವಾಸ್ ಫುಲ್ ಟೈಟ್ ಮತ್ತೆ ಫುಲ್ ನಿದ್ರೆ ಆದರೆ ನಾಗೇಶಣ್ಣ ಮಲಗಿದ್ದ ಜಾಗದಲ್ಲಿ ಎದ್ದು ಒಂದು ಬಿಡಿ ಹುಚ್ಚಿ ಹೇಳುತ್ತಾ ಕುಳಿತಿದ್ದರು ಅಷ್ಟೇ ವಿಚಿತ್ರ ಗಾಳಿ ಜೊತೆ ಒಂದು ಹುಡುಗಿ ಅಮ್ಮ ಅಂತ... ಅನುಭವ ನಿಮ್ಮಿಬ್ಬರಿಗೂ ಮಾರಾಯ ತೋ ಅಂತ!!!! ಹೇಳಿ ಎದ್ದು ಜೊತೆ ಇದ್ದಾಗ ಹಾಕಿದರೆ ಮತ್ತೊಬ್ಬ ಅಮ್ಮ ಅಮ್ಮ ಅನ್ನೋ ಸೌಂಡ್ ಕೇಳಿ ಕೇಳಿ ಚಾರ್ಮಾಡಿ ಘಾಟ್ ಪ್ರಯತ್ನ ಮಾಡಿದ್ದಲ್ವಾ ನಾಗೇಶಣ್ಣ ಶ್ರೀನಿವಾಸನನ್ನು ನಿಲ್ಲಿಸು ಸುಮಾರು ಅಂತ ನಾವು ಹಾಕಿದ್ದ ಬೆಂಕಿಕಡ್ಡಿ ಎದ್ದು ಲೈಟ್ ಆನ್ ಮಾಡಿದ್ರೆ ಅಷ್ಟೇ ಅಲ್ಲೇ ಒಂದು ಹುಡುಗಿ ಬೆಂಕಿ ಹತ್ತಿರ ನಿಂತು ಸ್ವಲ್ಪ ಮುಖ ಪರಿಚಯ ಕೂಡ ಇಲ್ಲದ ಒಂದು ವಿಚಿತ್ರವಾದ ಹುಡುಗಿ ನನ್ನ ಅಮ್ಮನನ್ನು ಮೇಲೆ ಇರೋ ರೋಡ್ನಲ್ಲಿ ಅಡ್ಡ ಹಾಕಿಕೊಂಡು ನಿಂತಿದ್ದಾರೆ... ಬನ್ನಿ ನಾನು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಅಂತ ಜೋರಾಗಿ ಕಿರುಚಿಕೊಂಡು ಹೇಳಿದ್ದು. ಹೇಳಿಕೇಳಿ ಚಾರ್ಮಾಡಿ ಘಾಟ್ ಈ ಜೊತೆ ಇದ್ದ ಪುಣ್ಯಾತ್ಮ ಫುಲ್ ಟೈಟ್ ಏನು ಕರೆದ್ರೂ ಎಚ್ಚರ ಆಗ್ಲಿಲ್ಲ ಸಾವು ಮಾರಾಯ ಅಂತ ನಮಗೆ ಎರಡು ಜನಕ್ಕೂ ಇಷ್ಟ ಇಲ್ಲ ಆದರೂ ಪಾಪ ಒಂದು ಹುಡುಗಿ ಸಡನ್ನಾಗಿ ಕರೆದು ಕಾಡಿನಮೇಲೆ ಓಡಿ ಓಡಿ ಹೋಗಿದ್ದಳು ಇಲ್ಲ. ರಾಜು ಇದು ನಿಜ ಕಣೋ ಮೇಲೆ ಯಾರು ಇದ್ದಾರೆ ಅದೇನಾಗುತ್ತೋ ನೋಡೋಣ ಬಾ.. ಕದ್ದು ಹಿಡಿದುಕೊಂಡು ಹೋಗಿ ನೋಡೇ ಬಿಡೋಣ ಅಂತ ದೇವರೇ ನೀನೇ ಕಾಪಾಡು ಅಂತ ಮನಸ್ಸಿನಲ್ಲಿ ದೇವರ ನೆನಪು.. ನಡಿ ಅದೆಲ್ಲಿ ಅಂತ ಕೇಳಿ ಬಿಡುವ ಅಷ್ಟೇ.
ಸುಮಾರು 10 ನಿಮಿಷ ಕಾಡಿನ ದಾರಿಯಲ್ಲಿ ನಡೆದು ಅವಳಮ್ಮನ ಹುಡುಕುವ ಪ್ರಯತ್ನ ನಮ್ದು ಆದರೆ ನಮ್ಮ ಜೊತೆ ಇದ್ದ ಹುಡುಗಿ ಮಾತ್ರ ಮುಂದೆ ಮುಂದೆ ಹೋಗುವುದು ವಿಕಾರ ಮತ್ತು ವಿಚಿತ್ರ ಬೆಳವಣಿಗೆ ಗುಡಿಸಲು ಮತ್ತು ಹೇಳಲು ಅಸಾಧ್ಯವಾದ ಬೆಳವಣಿಗೆ ಮಾತ್ರ ನಮ್ಮ ಅನುಭವಕ್ಕೆ ಬಂದಿದ್ದು ನಿಜ ಹುಡುಗಿ ಒಂದು ಬದಲಾಗಿದ್ದಳು. ಅರಚಾಟ ಕಿರುಚಾಟ ಒಂದು ವಿಚಿತ್ರ ಶಬ್ದ ಆಕ್ಷನ್ ನಮ್ಮ ಜೊತೆ ಇದ್ದ ಲೈಟ್ ಆಫ್ ಆಗಿತ್ತು ಆಗಿತ್ತು. ನಿಜಕ್ಕೂ ಊಹಿಸಲೂ ಅಸಾಧ್ಯವಾದ ಕೊನೆಗೆ ಹೇಳಿದ ಒಂದೇ ಶಬ್ದ ನನ್ನ ದೂರದ ಊರಿನಿಂದ ಕರ್ಕೊಂಡು ಬಂದು ಅತ್ಯಾಚಾರ ಮಾಡಿ ಇದೇ ಜಾಗದಲ್ಲಿ ನನ್ನ ಎದ್ದುಹೋದರು.
ನನ್ನ ಅಮ್ಮ ಕೂಡ ಇಲ್ಲೇ ಇದ್ದಾಳೆ ನನ್ನ ಅಮ್ಮಂಗೆ ಬೇಕು ಅಂತ ದೊಡ್ಡ ವಿಚಿತ್ರ ರೀತಿಯ ಶಬ್ದಗಳೊಂದಿಗೆ ಜೋರಾಗಿ ಕಿರುಚಿಕೊಂಡ ಓಡಿಹೋದ ದೃಶ್ಯ ನೋಡಿ ಹೋದಷ್ಟು ದೂರ ಎತ್ತರವಾಗಿ ಬೆಳೆದ ಇದ್ದ ವಿಚಿತ್ರ ಹುಡುಗಿ ಹಿಡಿ ಕಾಡಿನಲ್ಲಿ ವಿಚಿತ್ರ ಗಾಳಿ ನಮ್ಮ ಎರಡು ಜನದ ಬದುಕಿನ ಆಸೆ ಇಲ್ಲ. ಬಿಟ್ಟು ಒಂದು ನಿಮಿಷ ನಾವು ಎಲ್ಲಿದ್ದೇವೆ ಅನ್ನುವುದು ಒಂದು ಯೋಚನೆ ಮಾಡಿ ನನ್ನ ಜೊತೆ ಇದ್ದ ನಾಗೇಶಣ್ಣ ಅಲ್ಲೇ ಅಲೇಖಾನ್ ಗೇಟ್ ಹತ್ತಿರ ಇರೋ ದೆವ್ವ ಮತ್ತು ಭೂತಗಳ ಹೆಸರು ಕೇಳಿ ಕೈಮುಗಿದು 10ನಿಮಿಷದ ಜಾಗದಲ್ಲಿ ಕೂತು ಒಬ್ಬರಿಗೊಬ್ಬರು ಮತ್ತೆ ವಾಪಸ್ಸು ಬರುವ ಪ್ರಯತ್ನ ಮಾಡಿದ್ರೂ ಕೂಡ ಆ ಕಾಡಿನಲ್ಲಿ ಅಸಾಧ್ಯವಾದ ಮಾತು ದೇವರೇ ಗಟ್ಟಿ ಅಂತ ಜೀವನದ ಎಲ್ಲಾ ಆಸೆ ಬಿಟ್ಟು ವೇಳೆಗೆ ನಾವು ಅಡುಗೆ ಮಾಡಿ ಊಟ ಮಾಡಿದ ಜಾಗಕ್ಕೆ ಬಂದು ನೋಡಿದರೆ ನಿಜಕ್ಕೂ ವಿಸ್ಮಯ ಜೊತೆ ರಾತ್ರಿ ಅಲ್ಲೇ ಮಲಗಿದ್ದ ಇನ್ನೊಬ್ಬ ಜಾಗ ಬಿಟ್ಟು ಸ್ವಲ್ಪ ದೂರದಲ್ಲಿ ಮಲಗಿದ್ದರು. ಅಷ್ಟೇ ಅಲ್ಲ ಮಾಡಿದ ಹಾಡಿಗೆ ಕೂಡ ಸಂಪೂರ್ಣ ಹಾಳಾಗಿತ್ತು ಅವರನ್ನು ಎಚ್ಚರಗೊಳಿಸಿ ರಾತ್ರಿ ಏನಾಯಿತು ಅಂತ ನಿಮಗೆ ಗೊತ್ತಾ ಅಂದ್ರೆ ನನ್ನ ಎದೆ ಮೇಲೆ ಏನೋ ತುಳಿತ ಕತ್ತು ಹಿಸುಕಿದ ಅನುಭವ ನಿಮ್ಮನ್ನು ಹೋಗಬೇಡಿ ಅಂತ ಜೋರಾಗಿ ಕಿತ್ತಿದ್ದರು ಕೂಡ ನನ್ ಗಂಟಲಿನಿಂದ ಮಾತು ಬರಲಿಲ್ಲ. ಆದರೆ ನಾನು ಏನು ಮಾಡಲಿ ಅಂತ ಹೇಳಿದ್ರು ಹೋಗ್ಲಿ ಬಿಡು ಮಾರಾಯ ಇಲ್ಲಿ ಅಂತ ಉಂಟು... ಈ ಸಹವಾಸವೇ ಬೇಡ ಅನ್ನೋ ವಾದ-ಪ್ರತಿವಾದ.. ಆದರೆ ಈ ನಮ್ಮ ಮೂರು ಜನಕ್ಕೂ ಆದ ಅನುಭವ ತೆಗೆದುಕೊಂಡು ಹೋಗಿದ್ದ ಸಾಮಾಗ್ರಿಗಳನ್ನು ಅಲ್ಲೇ ಬಿಟ್ಟು ಒಂದು ಉಸಿರಿಗೆ ಮೈನ್ ರೋಡು ಯಾವಾಗ ಸಿಗುತ್ತೆ ಅನ್ನೋ ಪಾತ್ರದಲ್ಲಿ ಓಡಿಬಂದು ಮೈನ್ ರೋಡಿನಲ್ಲಿ ಬಂದು ಈ ವಿಷಯ ಇಬ್ಬರಿಗೆ ಒಬ್ಬರು ಚರ್ಚೆ ಮಾಡಿಕೊಂಡು ಬದುಕಿದೆಯಾ ಬಡ ಜೀವ ಅಂತ ಅಲ್ಲ ದಲ್ಲಿ ಕೈಕಾಲು ಮುಖ ತೊಳೆದು ಅಲ್ಲೇ ರಾತ್ರಿ ನಾವು ನೆನೆದುಕೊಂಡು ದೆವ್ವಗಳ ಸನ್ನಿಧಿಗೆ ಹೋಗಿ ಕೈಮುಗಿದು ಬಂದ ರೋಚಕ ಘಟನೆ ನನ್ನ ಜೀವನದಲ್ಲಿ ನಮ್ಮ ಮೂರು ಜನರ ಲೈಫಿನಲ್ಲಿ ಮರೆಯೋಕೆ ಸಾಧ್ಯವೇ ಇಲ್ಲ.
ಕೊನೆಗೆ ಆ ನಾಯಿ ಕೂಡ ಮೂರು ದಿನದ ಆದಮೇಲೆ ಮನೆಗೆ ಬಂತು ಅನ್ನೋ ವಿಷಯ ಕೇಳಿದರೆ ನನ್ನ ಜೀವಮಾನದಲ್ಲಿ ಕಾರ್ಡನ್ನು ರೋಡ್ ನಿಂದ ಅಲೇಖಾನ್ ಜಲಪಾತದ ಕಡೆ ಇಂದಿಗೂ ತಿರುಗಿ ನೋಡು ಧೈರ್ಯ ಮಾಡಲಿಲ್ಲ. ಅಷ್ಟೇ ಅಲ್ಲದೆ ಸೀದ ಬೆಂಗಳೂರು-10 ಪ್ರಯತ್ನ ಕೂಡ ಮಾಡದೆ ಅಲ್ಲಿ ನೋಡಿದ ಏನೋ ಗಳು ಮತ್ತು ಕೊಲೆ ಮಾಡಿ ಬಿಸಾಕಿದ ಅನಾಥ ಶವಗಳು ಎಷ್ಟೋ ಜನ ಯುವತಿಯರ ಅತ್ಯಾಚಾರ ಮಾಡಿ ಹಣ್ಣುಗಳನ್ನು ಹಾಕಿದ ಘಟನೆ ಅಷ್ಟೇ ಅಲ್ಲ ಕೆಲವರು ಏನೇನೋ ಆಸೆಯಿಟ್ಟುಕೊಂಡು ಆಸೆ ತೀರದೆ ಸತ್ತವರು ಯಾಕೋ ದೇವ ಆಗಿರಬಾರದು ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ ಆದರೆ ಚಾರ್ಮಾಡಿ ಘಾಟ್ ನಲ್ಲಿ ದೆವ್ವಗಳ ಕಾಟ ಇರೋದು ಮಾತ್ರ ಸತ್ಯ ಆದರೆ ಕೆಲವರಿಗೆ ಇದು ಕಲಿಯುಗ ನಂಬುವುದು ಸ್ವಲ್ಪ ಕಷ್ಟ ನಾನು ಮೊದಲು ಲೆಕ್ಕವಿಲ್ಲದಷ್ಟು ಸರಿ ಅಲ್ಲಿಗೆ ಹೋಗಿದ್ದೇನೆ ಕೇವಲ ಹೆಣಗಳು ಸಿಕ್ಕಿವೆ ಆದರೆ ಈ ರೀತಿ ಆಗಿದ್ದು ನನ್ನ ಅನುಭವದಲ್ಲಿ ಅದೇ ಫಸ್ಟ್ ಅದೇ ಲಾಸ್ಟ್ ಮತ್ತೆ ಆ ಜಾಗಕ್ಕೆ ಹೋಗುವ ಪ್ರಯತ್ನ ಮಾಡಲಿಲ್ಲ ನಾನು ಕೆಲವರಿಗೆ ನಿನ್ನ ವಿಚಿತ್ರ ಅನುಭವ ಆಗಿದ್ದರೂ ಕೂಡ ಯಾರು ಹೇಳಿಕೊಳ್ಳಲಿಲ್ಲ ಕಾರಣ ಅದು ಒಂದು ರಾತ್ರಿ ಅಲ್ಲಿಗೆ ಜಾಸ್ತಿ ಶಿಕಾರಿಗೆ ಹೋಗುವವರೇ ಜಾಸ್ತಿ ಆದಮೇಲೆ ಈ ವಿಚಾರ ಯಾರು ಹೇಳಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಮತ್ತೆ ಕೆಲವರ ಹಿತಕರ ಘಟನೆ ನೋಡಿ ನಂಗ್ಯಾಕೋ ಅಂತ ಸುಮ್ನೆ ಇರ್ತಾರೆ. ಅಮಾವಾಸ್ಯೆ ಹಿಂದಿನ ದಿನ ಚರಣ ಹೋಗುವ ಮತ್ತು ರಾತ್ರಿ ಅಲ್ಲೇ ವಾಸ್ತವ್ಯ ಹೋಗುವ ಸಾಹಸಕ್ಕೆ ಕೈಹಾಕಿ. ಆದರೆ ಜೋಪಾನ ಪ್ರಕೃತಿ ವಿಸ್ಮಯದ ಮುಂದೆ ನಾವೆಲ್ಲ ತಲೆಬಾಗಿ ಬೇಕು. ಅಪ್ಪಿತಪ್ಪಿ ಎರಡು ಮೂರು ಜನ ಹೋಗುವ ಪ್ರಯತ್ನ ದಯವಿಟ್ಟು ಮಾಡಬೇಡಿ ಈ ಪ್ರಪಂಚದಲ್ಲಿ ದೇವರು ಇದ್ದಾನೆ ಅಂತ ನಂಬುವ ನಾವು ದೇವ ಕೂಡ ಇದೆ ಅಂತ ನಂಬಲೇಬೇಕು.
ಇಂತಿ ನಿಮ್ಮ ರಾಜಪ್ಪ ಎಂ. ಪರಗೋಡು 9902916724.
"" ನಾ ಕಂಡ ನಿಗೂಢ ಚಾರ್ಮಾಡಿ "
ಧನ್ಯವಾದಗಳೊಂದಿಗೆ ನಿಮ್ಮರಾಜ್ ಎಂ ಜಾನ್
In this article was refereed by Varnesh Balur. This credit goes to him only.
some of references by Google photos, maps and youTube etc...,

Comments