Skip to main content

Posts

Showing posts from March, 2021

ನಿಗೂಢ ಜಗತ್ತಿನಲ್ಲಿ ನಮ್ಮ ಚಾರ್ಮಾಡಿ ಘಾಟ್

ನಿಗೂಢ ಜಗತ್ತಿನಲ್ಲಿ ನಮ್ಮ ಚಾರ್ಮಾಡಿ ಘಾಟ್ "ನಿಗೂಢ ಜಗತ್ತು" " ಅಮಾವಾಸ್ಯೆ ರಾತ್ರಿ " ಹೇಳಿ ಕೇಳಿ ನಾವು ಮಲೆನಾಡಿನ ಹುಡುಗರು ಈ ಶಿಕಾರಿ ಮೀನು ಇದೆಯಲ್ಲ ಮಾಮೂಲಿ ಆಗಷ್ಟೇ ಕಾಲೇಜು ಬಿಟ್ಟು ಮನೆಯಲ್ಲಿದ್ದೆ.  ಅದರಲ್ಲೂ ನನ್ಗೆ ಈ ಕಾಡಿನಲ್ಲಿ ತಿರುಗುವುದು ಅಂದ್ರೆ ನನಗೆ ಬಹಳ ಕುತೂಹಲ ಎಷ್ಟೆಂದರೆ ಒಬ್ಬನೇ ಆದರೂ ಭಯ ಇರುತ್ತಿರಲಿಲ್ಲ ಈ  ಕಾಡಿನಲ್ಲಿ ತಿರುಗಬೇಕು ಅನ್ನೋದು ನನ್ನ ಆಸೆ.  ಹೀಗೆ ಒಂದು ದಿನ ಸುಮಾರು ಎಂಟು ವರ್ಷದ ಹಿಂದೆ ನಾನು ನನ್ನೂರಿನ ಇನ್ನೊಬ್ಬ ವ್ಯಕ್ತಿ ( ಹತ್ತಿರದ ಅಲೇಖಾನ್ ) ಊರಿನ ಒಬ್ಬರು ಅವರ ಜೊತೆ ನಾನು ಒಂದು ನಾಯಿ ಕಾಡಿನಲ್ಲಿ ಎರಡು ದಿನ ಸುತ್ತಾಟದ ಜೊತೆಗೆ ಅವರಿಗೆ ಅಲೇಖಾನ್ ಗಿರಿಜನ ಪ್ರದೇಶವಾದ ಕಾರಣ, ಇಲ್ಲಿ ದೊರೆಯುವ ಜೇನು ಮತ್ತು ಕಾಡಿನಲ್ಲಿ ಸಿಗುವ ಸೀಗೆಕಾಯಿ ಇತರ ವಸ್ತುಗಳನ್ನು ಸಂಗ್ರಹ ಮಾಡಿ ಮಾರಾಟ ಅನುಮತಿ ( ಅಂದಿನ ಕಾಲದಲ್ಲಿ ಅವರಿಗೆ ಸರ್ಕಾರ ಗ್ರೀನ್ ಕಾರ್ಡನ್ನು ಒಂದು ಗುರುತಿನ ಚೀಟಿ ) ಕೊಟ್ಟಿತ್ತು. ಜೊತೆಗೆ ನನಗೂ ಕೂಡ ಕಾಡುತ್ತಿರುವ ಆಸೆ ಜಾಸ್ತಿ ಇದ್ದ ಕಾರಣ ಒಂದು ದಿನ ನಾವು ಮೂರು ಜನ ನಿರ್ಧಾರ ಮಾಡಿ ಒಂದು ಪ್ರದೇಶ ಆರಿಸಿಕೊಂಡೆವು ಆ ಜಾಗ ಕೊಟ್ಟಿಗೆಹಾರದಿಂದ ಸುಮಾರು ಮೂರು ಕಿಲೋಮೀಟರು ದೂರದಲ್ಲಿರುವ ಈಗಿನ ಅಲೇಖಾನ್ ಜಲಪಾತ ಅಂದ್ರೆ ಈಗಿನ ಪ್ರವಾಸಿಗರ ಸೆಲ್ಫಿ ಪಾಯಿಂಟ್ ಮತ್ತು ಸುಮಾರು ಐದಾರು ಜನರನ್ನು ಬಲಿ ತೆಗೆದುಕೊಂಡ ಅದೇ ಜಲಪಾತದ ಪಕ್ಕ ಸಮಯ ಸುಮಾರು ಸಂಜೆ 5:00 ...