Yudha Kaanda (ಯುದ್ಧ ಕಾಂಡ ) Director : K V Raju Producer : Rajkumar Song by S P Balasubrahmanyam Actor : V Ravichandran ಕುಡಿಯೋದೆ ನನ್ನ ವೀಕ್ನೆಸ್ಸು ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು ಹಿರಿಯರ ಮುಂದೆ ಬಾಲಕ ಬಡವರ ಮನೆಗೆ ಸೇವಕ ಕುಡುಕರಿಗೆಲ್ಲ ನಾಯಕ ಹ್ಯಾಗಿದೆ ನನ್ನ ಜಾತಕ ಒಂದು ಪೆಗ್ಗಿನ ಕಥೆಯಿದು ಇದರ ಒಳಗಿನ ವ್ಯಥೆ ಇದು ದೇವ ದಾನವರ ಸೈನ್ಯವು ಕಡಲು ಕಡೆಯುವ ಸಮಯವು ಜನಿಸಿತು ನೊಡಿ ಸುರಪಾನ ಆಯಿತು ಲೋಕಕೆ ಮಧುಪಾನ ಸೃಷ್ಟಿಯೆ ನೀಡಿದ ಶಾಪವಿದು ದೆವರೆ ಮಾಡಿದ ಪಾಪವಿದು ಇದರ ಮುಂದೆ ದೇವರು ಗುಲಾಮ ನಾನು ಇದನು ಆಳೊ ಸಾರ್ವಭೌಮ ಈ ಮಾತು ಸುಳ್ಳಲ್ಲ ಕುಡುಕನ ಬರವಣಿಗೆ ಒಮ್ಮೆ ರಾತ್ರಿಯ ಮಬ್ಬಲಿ ದೇವಲೋಕದ ಕ್ಲಬ್ಬಲಿ ವಿಸ್ಕಿಯೊಂದಿಗೆ ಸೂರ್ಯನು ಐಸಿನೊಂದಿಗೆ ಚಂದ್ರನು ರಂಭೆಯ ಡಿಸ್ಕೋ ವೀಕ್ಷಿಸಲು ಒಂದೆ ಚೇರಲಿ ಕುಳಿತಿರಲು ಸ್ನೇಹವ ಮರೆತ ಚಂದಿರನು ರಂಭೆಯ ಹಿಂದೆ ಓಡಿದನು ಅವನ ಸುಡಲು ಸೂರ್ಯ ಎದ್ದು ನಿಂತ ಪ್ರಾಣ ಭಯದಿ ಚಂದ್ರ ಅವಿತು ಕುಳಿತ ಆ ದಿಂದ ಇಬ್ಬರಿಗು ಸ್ನೇಹವೆ ಕೂಡಿಲ್ಲ ಅವರಿಗು ಕುಡಿಯೋ ವೀಕ್ನೆಸ್ಸು ಆದರೆ ಭೂಮಿಯ ಬೆಳಗೋದೆ ಅವರ ಬಿಸನೆಸ್ಸು ಕುಡಿಯದಿದ್ದರೆ ಈ ಜನ ನಡೆಯಲಾರದೊ ಜೀವನ ಹುಟ್ಟಿ ಸಾಯಲು ಸ್ಥಳವಿದೆ ಹೊಟ್ಟೆ ಬಟ್ಟೆಗೆ ಬರವಿದೆ ನಿಷೆಧ ಹೇರುವ ಸರಕಾರ ಒಳಗೆ ಕೊಡುವುದು ಸಹಕಾರ ಸರಕಾರದ ಈ ರೂಲ್ಸುಗಳು ಬಲ್ಬೆ ಇಲ್ಲದ ಕಂಭಗಳು ಬೆಳಕು ಕೊಡುವೆ ಎಂದು ಓಟು ಪಡೆವ ನಮ್ಮ ಜನರ ಕತ್ತಲಲ್ಲಿ ...
ನಿಗೂಢ ಜಗತ್ತಿನಲ್ಲಿ ನಮ್ಮ ಚಾರ್ಮಾಡಿ ಘಾಟ್ "ನಿಗೂಢ ಜಗತ್ತು" " ಅಮಾವಾಸ್ಯೆ ರಾತ್ರಿ " ಹೇಳಿ ಕೇಳಿ ನಾವು ಮಲೆನಾಡಿನ ಹುಡುಗರು ಈ ಶಿಕಾರಿ ಮೀನು ಇದೆಯಲ್ಲ ಮಾಮೂಲಿ ಆಗಷ್ಟೇ ಕಾಲೇಜು ಬಿಟ್ಟು ಮನೆಯಲ್ಲಿದ್ದೆ. ಅದರಲ್ಲೂ ನನ್ಗೆ ಈ ಕಾಡಿನಲ್ಲಿ ತಿರುಗುವುದು ಅಂದ್ರೆ ನನಗೆ ಬಹಳ ಕುತೂಹಲ ಎಷ್ಟೆಂದರೆ ಒಬ್ಬನೇ ಆದರೂ ಭಯ ಇರುತ್ತಿರಲಿಲ್ಲ ಈ ಕಾಡಿನಲ್ಲಿ ತಿರುಗಬೇಕು ಅನ್ನೋದು ನನ್ನ ಆಸೆ. ಹೀಗೆ ಒಂದು ದಿನ ಸುಮಾರು ಎಂಟು ವರ್ಷದ ಹಿಂದೆ ನಾನು ನನ್ನೂರಿನ ಇನ್ನೊಬ್ಬ ವ್ಯಕ್ತಿ ( ಹತ್ತಿರದ ಅಲೇಖಾನ್ ) ಊರಿನ ಒಬ್ಬರು ಅವರ ಜೊತೆ ನಾನು ಒಂದು ನಾಯಿ ಕಾಡಿನಲ್ಲಿ ಎರಡು ದಿನ ಸುತ್ತಾಟದ ಜೊತೆಗೆ ಅವರಿಗೆ ಅಲೇಖಾನ್ ಗಿರಿಜನ ಪ್ರದೇಶವಾದ ಕಾರಣ, ಇಲ್ಲಿ ದೊರೆಯುವ ಜೇನು ಮತ್ತು ಕಾಡಿನಲ್ಲಿ ಸಿಗುವ ಸೀಗೆಕಾಯಿ ಇತರ ವಸ್ತುಗಳನ್ನು ಸಂಗ್ರಹ ಮಾಡಿ ಮಾರಾಟ ಅನುಮತಿ ( ಅಂದಿನ ಕಾಲದಲ್ಲಿ ಅವರಿಗೆ ಸರ್ಕಾರ ಗ್ರೀನ್ ಕಾರ್ಡನ್ನು ಒಂದು ಗುರುತಿನ ಚೀಟಿ ) ಕೊಟ್ಟಿತ್ತು. ಜೊತೆಗೆ ನನಗೂ ಕೂಡ ಕಾಡುತ್ತಿರುವ ಆಸೆ ಜಾಸ್ತಿ ಇದ್ದ ಕಾರಣ ಒಂದು ದಿನ ನಾವು ಮೂರು ಜನ ನಿರ್ಧಾರ ಮಾಡಿ ಒಂದು ಪ್ರದೇಶ ಆರಿಸಿಕೊಂಡೆವು ಆ ಜಾಗ ಕೊಟ್ಟಿಗೆಹಾರದಿಂದ ಸುಮಾರು ಮೂರು ಕಿಲೋಮೀಟರು ದೂರದಲ್ಲಿರುವ ಈಗಿನ ಅಲೇಖಾನ್ ಜಲಪಾತ ಅಂದ್ರೆ ಈಗಿನ ಪ್ರವಾಸಿಗರ ಸೆಲ್ಫಿ ಪಾಯಿಂಟ್ ಮತ್ತು ಸುಮಾರು ಐದಾರು ಜನರನ್ನು ಬಲಿ ತೆಗೆದುಕೊಂಡ ಅದೇ ಜಲಪಾತದ ಪಕ್ಕ ಸಮಯ ಸುಮಾರು ಸಂಜೆ 5:00 ...